ಬೆಂಗಳೂರು: ಆಸ್ಟರ್ ಆಸ್ಪತ್ರೆ ಇನ್‌ಟ್ರಾ-ಆಪರೇಟಿವ್ ಇಲೆಕ್ಟ್ರಾನ್ ರೇಡಿಯೇಶನ್ ಥೆರಪಿ (IOeRT) ಅನ್ನು ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ಯನ್ನು ನೀಡಲು ಪರಿಚಯಿಸುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ಲಭ್ಯವಿರುವ ಈ ಕ್ರಾಂತಿಕಾರಿ ವಿಧಾನವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸೂಕ್ಷ್ಮ ರೇಡಿಯೇಶನ್ ಅನ್ನು ನೀಡುವ ಮೂಲಕ ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಉದ್ದೇಶಿಸಲಾಗಿದೆ, ಈ ಚಿಕಿತ್ಸೆ ಶರೀರದಲ್ಲಿ ಹೆಚ್ಚು ಹಾನಿಯಾಗುವುದನ್ನು ಕಡಿಮೆ ಮಾಡಿ ರೋಗಿಯೂ ಶೀಘ್ರ ಗುಣಮುಖರಾಗಲು ಸಹಾಯ ಮಾಡುತ್ತದೆ.
IOeRT ಚಿಕಿತ್ಸೆಯ ಪ್ರಯೋಜನಗಳು
• ನಿಖರ ಚಿಕಿತ್ಸೆ: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೇಡಿಯೇಶನ್ ಚಿಕಿತ್ಸೆಯನ್ನು ನಿಖರವಾಗಿ ನೀಡಲು ಸಾಧ್ಯವಾಗುತ್ತದೆ.
• ಹಾನಿಕಾರಕ ಪರಿಣಾಮಗಳನ್ನು ಕಡಿಮೆ ಮಾಡುವುದು: ಅನಾರೋಗ್ಯದ ದೇಹದ ಭಾಗಗಳಿಗೆ ರೇಡಿಯೇಶನ್ ಪ್ರಭಾವವನ್ನು ಕಡಿಮೆಮಾಡುತ್ತದೆ.
• ಶೀಘ್ರ ಚೇತರಿಕೆ: ರೋಗಿಗಳು ಶೀಘ್ರವಾಗಿ ಚೇತರಿಕೆ ಕಾಣಲು ಸಹಾಯಮಾಡುತ್ತದೆ, ಇದರಿಂದ ಅವರು ಶೀಘ್ರವಾಗಿ ದಿನನಿತ್ಯದ ಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸಲು ಸಾಧ್ಯವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ ಉಪ ನಿರ್ವಹಣಾ ನಿರ್ದೇಶಕಿ ಅಲಿಷಾ ಮುಪ್ಪನ್ , “ಆಸ್ಟರ್ ಆಸ್ಪತ್ರೆಗಳಲ್ಲಿ IOeRT ಅನ್ನು ಪರಿಚಯಿಸುತ್ತಿರುವುದು ಭಾರತದಲ್ಲಿ ಕ್ಯಾನ್ಸರ್ ಆರೈಕೆಯ ಪ್ರಮುಖ ಹಂತವಾಗಿದೆ. ಉತ್ತಮ ಫಲಿತಾಂಶಗಳು ಮತ್ತು ಉತ್ತಮ ಜೀವನದ ಗುಣಮಟ್ಟವನ್ನು ಪಡೆಯಲು ನಾವು ನಮ್ಮ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ನೀಡಲು ಈ ವ್ಯವಸ್ಥೆಯನ್ನು ಮಾಡಲಿದ್ದೇವೆ.
ಇನ್ನು ವೈಧ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ ಬಿ.ಎಲ್ ಸುಜಾತ ರಾಥೋಡ್ ಮಾತನಾಡಿ ಕ್ಯಾನ್ಸರ್ ಚಿಕಿತ್ಸೆಗೆ ದಿನೇ ದಿನೇ ಹೊಸ ಆವಿಷ್ಕಾರ ನಡೆಯುತ್ತಲೇ ಇದೆ. ಈ ನೂತನ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಲ್ಲಿ ರೋಗಿಗಳ ಚಿಕಿತ್ಸೆ ಮತ್ತು ಆರೈಕೆಗೆ ಸಹಕಾರಿಯಾಗಲಿದೆ. ಇದು ಕರ್ನಾಟಕ ಮಾತ್ರವಲ್ಲದೆ ದೇಶದ ವಿವಿಧ ರಾಜ್ಯದ ರೋಗಿಗಳು ಈ ಚಿಕಿತ್ಸೆ ಪಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.
ಡಾ. ಸೋಮಶೇಖರ್ ಎಸ್ ಪಿ, ಆಸ್ಟರ್ ಅಂತರಾಷ್ಟ್ರೀಯ ಆನ್‌ಕೋಲಾಜಿ ಸಂಸ್ಥೆಯ ಜಾಗತಿಕ ನಿರ್ದೇಶಕ,
ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೋಥೆರತಿ ಬಹು ಮುಖ್ಯ ಚಿಕಿತ್ಸೆ ಈ ತಂತ್ರಜ್ಞಾನದ ಸಹಾಯದಿಂದ ಆರು ವಾರ ತೆಗೆದುಕೊಳ್ಳುವ ಚಿಕಿತ್ಸೆಯ ಸಮಯವನ್ನು ಒಂದು ವಾರದಲ್ಲಿ ನೀಡಬಹುದಾಗಿದೆ. ಮತ್ತು ರೋಗಿಯು ಶೀಘ್ರವಾಗಿ ಗುಣಮುಖರಾಗುತ್ತಾರೆ.
ಈ ಸಮಾರಂಭದಲ್ಲಿ ಡಾ. ಎಮ್ ಎಸ್ ಬೆಲ್ಲಿಯಪ್ಪ, ಆಸ್ಟರ್ ಆಸ್ಪತ್ರೆಗಳಲ್ಲಿ ರೇಡಿಯೇಶನ್ ಆನ್‌ಕೋಲಾಜಿಯ ಹೆಡ್ ಮತ್ತು ಲೀಡ್ ಕನ್ಸಲ್ಟಂಟ್, ಮತ್ತು ಫ್ರಾನ್ಸಿಸ್ಕೋ ಝಾನೆಟ್ಟಿ, ಎಸ್‌ಐಟಿ ಸೊರ್ಡಿನಾ ಅಧ್ಯಕ್ಷ ಮತ್ತು ಸಿಇಒ ಉಪಸ್ಥಿತರಿದ್ದರು. ಅವರು IOeRT ಯ ಪರಿಣಾಮಕಾರಿ ಶಕ್ತಿಯ ಬಗ್ಗೆ ಚರ್ಚಿಸಿ ತಿಳಿಸಿದರು.
ಈ ಘಟನೆ ಭಾರತದಲ್ಲಿ ಹೊಸ ಆರೋಗ್ಯ ಪರಿಹಾರಗಳನ್ನು ಹೊಂದಲು ಮಹತ್ವದ ಕೆಲಸಮಾಡುತ್ತದೆ, ಮತ್ತು ಆಸ್ಟರ್ ಆಸ್ಪತ್ರೆಗಳು ಸುಧಾರಿತ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯಕೀಯ ಚಿಕಿತ್ಸೆಗೆ ನಿರಂತರವಾಗಿ ಶ್ರಮಿಸುತ್ತಿದ್ದು ಕ್ಯಾನ್ಸರ್ ಚಿಕಿತ್ಸೆ ಮತ್ತು ಆರೈಕೆಯನ್ನು ಮಾಡಲು ಬದ್ಧವಾಗಿದೆ ಎಂದು ತಿಳಿಸಿದರು
Publisher: ಕನ್ನಡ ನಾಡು | Kannada Naadu